ಭವ್ಯ ಭಾರತದೆಡೆಗೆ ನಾರಿ
- Soumya K.P
- Sep 25, 2024
- 1 min read
ನದಿಯ ದಡದಲ್ಲಿ ಬೆಳೆದ ಮರವಲ್ಲ
ನಾನು
ಬಂಜರು ಮರಭೂಮಿಯಲ್ಲಿ ಬೇರೀಳಿಸಿದ ವಿಶಾಲ ವೃಕ್ಷ ನಾನು
ಸೂರ್ಯ ಉದಯಿಸಿದರೇನಾಯಿತು? ಗೋಡೆ ಮಸುಕಿನಲಿ ದುಡಿಯುವಳು ನಾನು
ಮಳೆಯಲ್ಲಿ ನೆನೆದು ಕುಣಿಯುವ ನವಿಲಾಗುವ ಹಂಬಲ
ಕಠೋರ ನಿಯಮಗಳಿಂದ ಭಾವ ರೆಕ್ಕೆಗಳಾದವು ದುರ್ಬಲ
ದಿನವು ಕಳೆದು ಜಗವು ಬದಲಾದೀತು ಎಂಬ ನಂಬಿಕೆ ಕೊನೆಗು ನಿಜವಾಗಿರಲು
ಮುಡಿ ಕಟ್ಟಿ ಜಡೆ ಹೆಣೆದು ವನಿತೆ ದಾಟಲು ಹೊಸ್ತಿಲನು
ಶಾಸ್ತ್ರೀಯ ಸಂಗೀತದಿಂದ ಶಸ್ತ್ರಚಿಕಿತ್ಸೆಯ ತನಕ
ಅಡುಗೆಯವಳಿಂದ ಅಭಿಯಂತರುವಾಗುವ ತನಕ ಮೂಡಿದವು ಕನಸುಗಳು ಗಟ್ಟಿಗೂಂಡವು ರೆಕ್ಕೆಗಳು
ಹಾರಲಾರಂಭಿಸಿದೆನು ಹೊತ್ತು ನನ್ನ ಭಾರತದ ಭವಿಷ್ಯವನು .




Comments